ಗುರಾಣಿಕ ಗ್ರಂಥಿಯ ರೋಗಗಳು 

ಗುರಾಣಿಕ ಗ್ರಂಥಿಗೆ ಸಹ ಇತರ ಅಂತಃಸ್ರಾವೀ ಗ್ರಂಥಿಗಳಿಗೆ ಬರುವ ಹಾಗೆ ಕೆಲವು ರೋಗಗಳು ಬರುತ್ತವೆ. ಗ್ರಂಥಿಯ ಸ್ರಾವ (ಹಾರ್ಮೋನ್) ಹೆಚ್ಚಾಗಿರಬಹುದು ಇಲ್ಲವೇ ಕೊರೆಯಾಗಿರಬಹುದು. ರೋಗ ಬಂದ ಗುರಾಣಿಕ ಗ್ರಂಥಿ ಸಾಮಾನ್ಯವಾಗಿ ದೊಡ್ಡದಾಗಿ ಊದಿದಂತೆ ಇರುತ್ತದೆ. ಈ ಸ್ಥಿತಿಗೆ ಗಳಗಂಡ (ಗಾಯ್ಟರ್) ಎಂದು ಹೆಸರು. ಕೆಲವು ಗಳಗಂಡಗಳಲ್ಲಿ ಗುರಾಣಿಕ ಗ್ರಂಥಿ ಗಂಟುಗಂಟಾಗಿರುತ್ತದೆ. ಗ್ರಂಥಿ ಸವೆದು ಕೃಶವೂ (ಅಟ್ರೊಫಿ) ಆಗಬಹುದು. ಗರ್ಭದ ಪಿಂಡದಲ್ಲಿ ಗುರಾಣೀಕದ ವಿಕಾಸ ಕೆಟ್ಟಿದ್ದರೂ ಗುರಾಣಿಕ ಗಂತಿ (ಟ್ಯೂಮರ್) ಉಂಟಾಗಬಹುದು. ಆದರೆ ಇದು ಬಲು ಅಪರೂಪ.

ಗಳಗಂಡ ರೋಗದಲ್ಲಿ ರೋಗಿಗೆ ಐಯೋಡಿನ್‍ಯುಕ್ತ ಉಪ್ಪನ್ನು ಸೇವಿಸಲು ತಿಳಿಸಲಾಗುತ್ತದೆ.

ಗಳಗಂಡ ರೋಗ : ಐಯೋಡಿನ್ ಮಹತ್ವ :

ಬೆಳೆಯುವ ಮಕ್ಕಳಲ್ಲಿ ಐಯೋಡಿನ್ ಕೊರತೆಯಾದರೆ, ಮಕ್ಕಳು ಗಳಗಂಡ ರೋಗಕ್ಕೆ ತುತ್ತಾಗುತ್ತಾರೆ. ಬೆಳೆಯುವ ಶಿಶುಗಳಿಗೆ ಐಯೋಡಿನ್ ಕೊರೆತೆಯಾದರೆ ಮಗುವು ಜೀವನ ಪರ್ಯಂತ ನರಳುವಂತಾಗುತ್ತದೆ. ಮಗುವಿನಲ್ಲಿ ಮೆದುಳು ಹಾಗೂ ನರಮಂಡಲದ ಬೆಳವಣಿಗೆಯ ಸಂಪೂರ್ಣವಾಗಿ ಕುಂಠಿತವಾಗಿ ಮಗು ಶಾಶ್ವತವಾಗಿ ಬುದ್ಧಮಾಂಧ್ಯವಾಗಬಹುದು, ಮಗುವಿಗೆ ಶಾಶ್ವತ ಅಂಗವಿಕಲತೆ ಬರಬಹುದು.

ಗರ್ಭೀಣಿಯಲ್ಲಿ ಐಯೋಡಿನ್ ಸೂಕ್ತ ಪ್ರಮಾಣದಲ್ಲಿ ದೇಹದಲ್ಲಿರದಿದ್ದರೆ, ಮತ್ತೆ ಮತ್ತೆ ಗರ್ಭಪಾತವಾಗಬಹುದು (ರಿಪೀಟೆಡ್ ಅಬಾರ್ಷನ್) ತಾಯಿಯ ಮೃತವಾಗಿರುವ ಮಗುವಿಗೆ ಜನ್ಮ ನೀಡಬಹುದು (ಸ್ಟೀಲ್‍ಬರ್ತ್)
ಗಳಗಂಡ ರೋಗಕಾರಕಗಳು ಎಂದರೇನು? (ಗಾಯಟ್ರೋಜನ್ಸ್) :

ನಾವು ಸೇವಿಸುವ ಆಹಾರದಲ್ಲಿ (ಉದಾ: ಗಡ್ಡೆಕೋಸು, ಹೂವು ಕೋಸಲು) ಕೆಲವು ನಾವು ಸೇವಿಸುವ ಆಹಾರದಲ್ಲಿರುವ ಐಯೋಡಿನ್ ಖನಿಜವನ್ನು, ಗುರಾಣಿಕ ಗ್ರಂಥಿಯ ಉಪಯೋಗಿಸದಂತೆ, ಐಯೋಡಿನ್ ಖನಿಜದೊಂದಿಗೆ ಸಂಯೋಗ ಹೊಂದುತ್ತದೆ. ಆಗ ನಾವು ಎಷ್ಟೆ ಐಯೋಡಿನ್‍ಯುಕ್ತ ಆಹಾರವನ್ನು ಸೇವಿಸಿದರೂ ಕೂಡ ಅವುಗಳ ಜೊತೆಗೆ ಗಳಗಂಡ ರೋಗಕಾರಕಗಳನ್ನು ಸೇವಿಸುವುದರಿಂದ ಗಳಗಂಡ ರೋಗವು ವ್ಯಕ್ತಿಗೆ ಶತಸಿದ್ಧ.
ಐಯೋಡಿನ್ ಅವಶ್ಯಕತೆ : 

ವ್ಯಕ್ತಿಗೆ ದಿನಕ್ಕೆ ಸುಮಾರು 150ಮಿಲಿ ಗ್ರಾಂನಷ್ಟು ಐಯೋಡಿನ್ ಅವಶ್ಯಕತೆ ಇದೆ. ಇಷ್ಟು ಪ್ರಮಾಣವನ್ನು ಒಬ್ಬ ವ್ಯಕ್ತಿಯ ತಾನು ಸೇವಿಸುವ ಆಹಾರಕ್ಕೆ ತನ್ನ ಅಗತ್ಯಕ್ಕೆ ತಕ್ಕಂತೆ ಅಯೋಡಿನ್‍ಯುಕ್ತ ಉಪ್ಪನ್ನು ಉಪಯೋಗಿಸಿದರೆ ಸಾಕು, ವ್ಯಕ್ತಿಯ ಗಳಗಂಡ ರೋಗದಿಂದ ದೂರವಿರುತ್ತಾನೆ.
ಐಯೋಡಿನ್ ಸಾಗರದ ಉತ್ಪನ್ನಗಳಲ್ಲಿ ಹೇರಳವಾಗಿದೆ. ಸಮುದ್ರದ ಮೀನು, ಮೀನಿನ ಎಣ್ಣೆ, ಸೊಪ್ಪು ಹಾಲು ಹಾಗೂ ತರಕಾರಿಗಳಲ್ಲಿ ಹೇರಳವಾಗಿದೆ.

ಗುರಾಣಿಕ ಗ್ರಂಥಿಗೆ ಅರ್ಬುದ ರೋಗ (ಕ್ಯಾನ್ಸರ್) :
ಗುರಾಣಿಕ ಗ್ರಂಥಿಗೆ ಅರ್ಬುದ ರೋಗ ತಗಲಬಹುದು. ಆಗ ಇತರೆ ಯಾವುದೇ ಭಾಗದ ಅರ್ಬುದ ರೋಗದಂತೆಯೇ, ವ್ಯಕ್ತಿಯ ಅತಿ ಹಸಿವಿನಿಂದ ಬಳಲುತ್ತಾನೆ. ದೇಹದ ಚಯಾಪಚಯ ಹೆಚ್ಚುವುದು, ವ್ಯಕ್ತಿಯ ದೇಹದ ತೂಕ ಕಡಿಮೆಯಾಗುವುದು, ವ್ಯಕ್ತಿಯ ಧ್ವನಿಯು ಬದಲಾಗುತ್ತದೆ. ಅರ್ಬುದ ರೋಗವು ಪ್ರಾರಂಭಾವಸ್ಥೆಯಲ್ಲಿದ್ದರೆ, ಗುರಾಣಿಕ ಗ್ರಂಥಿಯನ್ನು ಶಸ್ತ್ರ ಚಿಕಿತ್ಸೆಯಿಂದ ತೆಗದು ಹಾಕಿ ಗುರಾಣಿಕ ಗ್ರಂಥಿಯ ಸ್ರಾವ (ಥೈರಾಯ್ಡ್ ಹಾರ್ಮೋನ್) ವನ್ನು ಕೃತಕವಾಗಿ ಜೀವನ ಪರ್ಯಂತ ವ್ಯಕ್ತಿಗೆ ನೀಡಬೇಕಾಗುತ್ತದೆ. ಕ್ಷ-ಕಿರಣ ಹಾಗೂ ಔಷಧಿಗಳನ್ನು (ಅರ್ಬುದ ರೋಗಕ್ಕೆ ಕೀಮೋಥೆರಪಿ) ಬಳಸಲಾಗುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ